Friday, July 31, 2020

ಶಿಕ್ಷಕರಿಗೆ ವರ್ಕ್ ಫ್ರಂ ಹೋಮ್ ನ ಅವಧಿಯಲ್ಲಿ ನಿರ್ವಹಿಸಿದ ಗೃಹ ಕೃತ್ಯಗಳ ವಿವರ

ಶಿಕ್ಷಕರಿಗೆ ವರ್ಕ್ ಫ್ರಂ ಹೋಮ್ ನ ಅವಧಿಯಲ್ಲಿ ನಿರ್ವಹಿಸಿದ ಗೃಹ ಕೃತ್ಯಗಳ ವಿವರ

 ಷರಾ ಮಾನ್ಯ ಅಪರ ಆಯುಕ್ತರ ,ಸಾ,ಶಿ, ಇಲಾಖೆ, ಕಲಬುರಗಿ ಇವರ ಸುತ್ತೋಲೆ ಪತ್ರ ಸಂಃ ಯೋ/ವರ್ಕ
ಫ್ರಂ ಹೋಮ್/2020-2021 ದಿನಾಂಕಃ17-07-2020ರ 
 ಪ್ರಕಾರ ಅಸ್ಸೈನ್ಮೆಂಟ್ಸ್

ಮಹಮದ್ ಬಾಷಾ ಶಿಕ್ಷಕರು

Wednesday, July 29, 2020

ನಲಿಕಲಿ ಪೊಪೇಟ್ ಬೊಂಬೆಗಳು ತಯಾರಿಸುವ ವಿಧಾನ NALIKALI POPART BOMBE

ನಲಿಕಲಿ ಪೊಪೇಟ್ ಬೊಂಬೆಗಳು ತಯಾರಿಸುವ ವಿಧಾನ. ಇದಕ್ಕೆ ಬೇಕಾದ ಸಾಮಗ್ರಿಗಳು ಪ್ರಾಣಿಗಳ ಚಿತ್ರಗಳು,ಅಂಟು,ರಟ್ಟು,ಸೂಜಿ,ದಾರ,ಕತ್ತರಿ ಮತ್ತು ಕಡ್ಡಿಗಳು.

Sunday, July 19, 2020

"ಸರ್ಕಾರಿ ಶಾಲೆಗಳು ಹಾಗೂ ಶಾಲಾ ಮಕ್ಕಳ ಗುಣಾತ್ಮಕ ಶಿಕ್ಷಣದ ಸಬಲೀಕರಣಕ್ಕಾಗಿ ಶಿಕ್ಷಕರು ಪಾಲಕರು ಇಲಾಖೆ ಕೈಗೊಳ್ಳಬಹುದಾದ ಮಾರ್ಗೋಪಾಯಗಳು

             "ಸರ್ಕಾರಿ ಶಾಲೆಗಳು ಹಾಗೂ ಶಾಲಾ ಮಕ್ಕಳ ಗುಣಾತ್ಮಕ ಶಿಕ್ಷಣದ ಸಬಲೀಕರಣಕ್ಕಾಗಿ ಶಿಕ್ಷಕರು ಪಾಲಕರು ಇಲಾಖೆ ಕೈಗೊಳ್ಳಬಹುದಾದ ಮಾರ್ಗೋಪಾಯಗಳು."
                     ಶಿಕ್ಷಣ ಎಂಬುದು ಜ್ಞಾನ, ಕೌಶಲ್ಯ ,ಅನುಭವಗಳ ಪ್ರಸಾರವಾಗಿದೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಪ್ರಸಾರವಾಗುತ್ತ ಪ್ರಭುತ್ವ ಕಲಿಕೆಯನ್ನು ಉಂಟುಮಾಡುವ ಸಾಧನವಾಗಿದೆ. ಅನಾದಿಕಾಲದಿಂದಲೂ ಸಮುದಾಯದಲ್ಲಿ ಒಬ್ಬರಿಂದೊಬ್ಬರಿಗೆ ವಿವಿಧ ರೀತಿಯಲ್ಲಿ ಈ ಜ್ಞಾನ ಹಾಗೂ ಅನುಭವಗಳ ಪ್ರಸಾರ ಆಗುತ್ತಾ ಬಂದಿದೆ. ಇದರಲ್ಲಿ ಕಥೆ ಪುರಾಣಗಳಿಂದ ಪಡೆದ ಜ್ಞಾನವು ಶಿಕ್ಷಣದ ಒಂದು ಮಾಧ್ಯಮವಾಗಿತ್ತು.
          ಭಾರತೀಯರಲ್ಲಿ ಶಿಕ್ಷಣ ಪದ್ಧತಿಯು ಗುರುಕುಲ ಪದ್ಧತಿಯಿಂದ ಆರಂಭಗೊಂಡಿತು ಗುರುಕುಲದಲ್ಲಿ ಜೀವನಕ್ಕೆ ಬೇಕಾದ ಅವಶ್ಯಕವಾದ ವಿವಿಧ ಕೌಶಲ್ಯಗಳನ್ನು ಪಡೆದ ನಂತರ ಅದನ್ನು ನಿಜ ಜೀವನದಲ್ಲಿ ಅಳವಡಿಸಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಹೊಂದುವುದಾಗಿತ್ತು. ಇದರಲ್ಲಿ ವೇದ, ಉಪನಿಷತ್ತು, ಯುದ್ಧ ಕಲೆ, ಎಲ್ಲವನ್ನೂ ಶಿಕ್ಷಣದಲ್ಲಿ ಪಡೆಯುತ್ತಿದ್ದರು. ನಂತರ ಶಿಕ್ಷಣ ಬ್ರಿಟಿಷರ ಕಾಲದಲ್ಲಿ ಪಾಶ್ಚಾತ್ಯ ಶಿಕ್ಷಣಕ್ಕೆ ಪೂರ್ಣ ಒಳಪಟ್ಟು ಅನೇಕ ಬದಲಾವಣೆಗಳನ್ನು ಕಂಡಿದೆ. ಗುರುಕುಲದಲ್ಲಿ ಪಡೆಯುತ್ತಿದ್ದ ಶಿಕ್ಷಣಕ್ಕಿಂತ ಪ್ರಸ್ತುತ ಕಾಲಮಾನಕ್ಕೆ ಒಗ್ಗಿಕೊಳ್ಳಲು ಶಿಕ್ಷಣ ಪಡೆಯುತ್ತಿರುವ ಕೇಂದ್ರಗಳು ಶಾಲೆ ಎಂದು ಕರೆಯಲ್ಪಟ್ಟವು.
         ಶಾಲೆಯು ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ಬೋಧನೆಗೆ ವಿನ್ಯಾಸಗೊಳಿಸಲಾದ ಒಂದು ಸಂಸ್ಥೆ. ಬಹುತೇಕ ದೇಶಗಳು, ಸಾಮಾನ್ಯವಾಗಿ ಕಡ್ಡಾಯ ಶಿಕ್ಷಣವಾದ, ಅಧಿಕೃತ ಶಿಕ್ಷಣದ ವ್ಯವಸ್ಥೆಗಳನ್ನು ಹೊಂದಿವೆ. ಈ ವ್ಯವಸ್ಥೆಗಳಲ್ಲಿ, ವಿದ್ಯಾರ್ಥಿಗಳು ಶಾಲೆಗಳ ಸರಣಿಯ ಮೂಲಕ ಮುನ್ನಡೆಯುತ್ತಾರೆ.ಒಂದು ದೇಶದ ಅಭಿವ್ರದ್ದಿಯನ್ನು ಸದರಿ ದೇಶದ ಶಿಕ್ಷಣದ ವ್ಯವಸ್ಥೆಯ ಮೇಲೆ ಅಳೆಯಲಾಗುತ್ತದೆ.
             ಈ ರೀತಿ ಬ್ರಿಟಿಷ್ ಮಿಷನರಿಗಳಿಂದ ಆರಂಭವಾದ ಶಿಕ್ಷಣ ಸ್ವಾತಂತ್ರ್ಯ ನಂತರವೂ ಶಿಕ್ಷಣ ಪದ್ಧತಿಯಲ್ಲಿ ಅನೇಕ ಬದಲಾವಣೆಗಳು ಕಾಣುತ್ತಾ ಬಂದಿದೆ. ಶಿಕ್ಷಣ ಎಂಬುದು ಈಗ ಮಕ್ಕಳ ಮೂಲಭೂತ ಹಕ್ಕುಗಳಲ್ಲಿ ಒಂದಾಗಿ ಪರಿಗಣಿಸಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಮಗುವನ್ನು ಸುಶಿಕ್ಷಿತನನ್ನಾಗಿಸುವ ಉದ್ದೇಶದಿಂದ, ಶಿಕ್ಷಣದ ಸಾರ್ವತ್ರೀಕರಣದ ಉದ್ದೇಶದಿಂದ ಸರ್ಕಾರ ಸಕಲ ಸೌಕರ್ಯಗಳನ್ನು ನೀಡುವುದರ ಜೊತೆಗೆ ಅದರ ಯಶಸ್ಸಿಗೆ ಶ್ರಮಿಸುತ್ತಿದೆ.
           ಅದರಲ್ಲೂ ಪಟ್ಟಣದಿಂದ ಹಿಡಿದು ಹಳ್ಳಿಯವರೆಗೂ, ಶ್ರೀಮಂತರಿಂದ ಕಡು ಬಡ ಮಕ್ಕಳಿಗೂ, ಎಲ್ಲರಿಗೂ ಶಿಕ್ಷಣ ನೀಡುವ ಮೂಲ ಸ್ಥಳವೆಂದರೆ ಸರ್ಕಾರಿ ಶಾಲೆ ಎಂದರೆ ತಪ್ಪಾಗಲಾರದು. ಸರ್ಕಾರದ ಸರ್ವಶಿಕ್ಷಣ ಅಭಿಯಾನ ಯೋಜನೆ, RTE ಗುಣಾತ್ಮಕ ಶಿಕ್ಷಣ ಹಾಗೂ ಸಬಲೀಕರಣಕ್ಕಾಗಿ ಪೂರಕವಾಗಿದೆ.
              ಶಿಕ್ಷಣ ಎಂಬುದು ನಿಂತ ನೀರಂತಾಗದೆ ಸದಾ ಹರಿಯುತ್ತಿರುವ ನೀರಿನಂತೆ ಇರಬೇಕು. ಶಿಕ್ಷಣ ಪಡೆದ ಮಗು ತನ್ನ ಜೀವನ ರೂಪಿಸಿಕೊಳ್ಳುವ ಕಲೆಯನ್ನು ಹೊಂದಿರಬೇಕು. ಇದಕ್ಕಾಗಿ ಗುಣಾತ್ಮಕ ಶಿಕ್ಷಣ ನೀಡುವುದು ಅವಶ್ಯಕ. ಸರ್ಕಾರಿ ಶಾಲೆ ಹಾಗೂ ಮಕ್ಕಳ ಗುಣಾತ್ಮಕ ಶಿಕ್ಷಣದ ಸಬಲೀಕರಣಕ್ಕೆ ಅನೇಕ ಪ್ರಯೋಗಗಳು, ಸಂಶೋಧನೆಗಳು ನಡೆಯುತ್ತಾ ಬಂದಿವೆ. ಈ ಸಂಶೋಧನೆಗಳು, ಪ್ರಯೋಗಗಳಿಂದ ಶಿಕ್ಷಣದ ಕ್ಷೇತ್ರದಲ್ಲಿ ಗುಣಾತ್ಮಕತೆಗೆ ಶಿಕ್ಷಕರು, ಪಾಲಕರು, ಇಲಾಖೆ ಸೇರಿ ಪಾಲುದಾರರಾಗುತ್ತಾರೆ. ಪ್ರತಿಯೊಂದು ಯೋಜನೆಗಳು, ಪ್ರಯೋಗಗಳು, ಸಂಶೋಧನೆಗಳು, ಯಶಸ್ವಿಯಾಗಬೇಕಾದರೆ ಅದನ್ನು ಸಾಕಾರ ರೂಪಕ್ಕೆ ತರುವ ಶಿಕ್ಷಕ ವರ್ಗ ಬಹುಮುಖ್ಯ. ಶಿಕ್ಷಕ ವರ್ಗ ಸರ್ಕಾರ ತರುವ ಎಲ್ಲಾ ಯೋಜನೆಗಳು ಯಶಸ್ವಿಯಾಗಲು ಮೂಲಭೂತರಾಗಿರುತ್ತಾರೆ. ಅದಕ್ಕೆ ತಕ್ಕಂತೆ ಸಮುದಾಯದ ಸಹಕಾರ ಹಾಗೂ ಇಲಾಖೆಯ ಮಾರ್ಗದರ್ಶನವೂ ಅವಶ್ಯಕ.
                 ಸರ್ಕಾರಿ ಶಾಲೆಗಳು ಹಾಗೂ ಮಗುವಿನ ಗುಣಾತ್ಮಕ ಶಿಕ್ಷಣದ ಸಬಲೀಕರಣಕ್ಕೆ ಶಿಕ್ಷಕರ ಪಾತ್ರ ನೋಡುವುದಾದರೆ ಶಾಲೆಗೆ ಬರುವ ಮಗು ಬಿಳಿಯ ಖಾಲಿ ಹಾಳೆಯಂತಿರುತ್ತಾನೆ. ಆ ಮಗುವಿಗೆ ಜ್ಞಾನವೆಂಬ ಬಣ್ಣಗಳಿಂದ ಆಕರ್ಷಕ ಚಿತ್ರದಂತೆ ರೂಪಿಸುವ ಗುರುತರ ಸ್ಥಾನ ಶಿಕ್ಷಕರದ್ದಾಗಿದೆ. ಸರ್ಕಾರ ಶಾಲೆಗಳ, ಮಕ್ಕಳ ಗುಣಾತ್ಮಕ ಶಿಕ್ಷಣಕ್ಕಾಗಿ ಅನೇಕ ಯೋಜನೆಗಳು ತರುತ್ತಿದ್ದು ಅವು ಯಶಸ್ವಿಯಾಗಲು ಶಿಕ್ಷಕರ ಶ್ರಮ ಮೂಲ ಕಾರಣ. ಶಿಕ್ಷಕರು ನಿರಂತರ ಅಧ್ಯಯನದಲ್ಲಿ ಸಂಶೋಧನೆಗಳಲ್ಲಿ ತೊಡಗಿಕೊಂಡಾಗ ಶಿಕ್ಷಣ ಕ್ಷೇತ್ರದಲ್ಲಿ ಕಂಡುಬರುವ ಯಾವುದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಷ್ಟು ಶಕ್ತರಾಗುತ್ತಾರೆ.
       ಸರ್ಕಾರಿ ಶಾಲೆಗಳು ಹಾಗೂ ಶಾಲಾ ಮಕ್ಕಳ ಗುಣಾತ್ಮಕ ಶಿಕ್ಷಣದ ಸಬಲೀಕರಣಕ್ಕಾಗಿ ಶಿಕ್ಷಕರ ಕಾರ್ಯ ಈ ಕೆಳಕಂಡಂತೆ ಕಾಣಬಹುದು:-


  • ಸರ್ಕಾರದಿಂದ ಬರುವ ಯೋಜನೆಗಳನ್ನು ಮಕ್ಕಳಿಗೆ ಯಶಸ್ವಿಯಾಗಿ ತಲುಪುವಂತೆ ಮಾಡುವ ಕಾರ್ಯ
  • ಮಕ್ಕಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸುವುದು
  • ತಾನು ನಿರಂತರ ಅಧ್ಯಯನ ಸಂಶೋಧನೆ ಪ್ರಯೋಗಗಳಲ್ಲಿ ತೊಡಗುವುದು
  • ಮಕ್ಕಳ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಯ ಜ್ಞಾನವನ್ನು ಹೊಂದಿರುವುದು
  • ಮಕ್ಕಳ ಮನೋವಿಜ್ಞಾನದ ಬಗ್ಗೆ ಸೂಕ್ತ ಜ್ಞಾನ ಹೊಂದಿರುವುದು
  • ತರಗತಿಯಲ್ಲಿ ಕಂಡುಬರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಶಕ್ತಿ ಹೊಂದುವುದು
  • ಶಾಲೆಯಲ್ಲಿ ವಿಭಿನ್ನ ವಯೋಮಾನದ ಮತ್ತು ವಿಭಿನ್ನ ಪ್ರವೃತ್ತಿಯ ಮಕ್ಕಳು ಇರುವುದನ್ನು ಅರಿತು ಎಲ್ಲರಿಗೂ ಪೂರ್ವಕವಾದ ವಾತಾವರಣ ಕಲ್ಪಿಸಿಕೊಡುವುದು
  • ಶಾಲೆಯಲ್ಲಿ ಮಕ್ಕಳಿಗೆ ಭಯ ಮುಕ್ತವಾದ ವಾತಾವರಣವನ್ನು ಕಲ್ಪಿಸಿಕೊಡುವುದು
  • ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಹಾಗೂ ರಾಜ್ಯ ಪಠ್ಯಕ್ರಮ ಚೌಕಟ್ಟಿಗೆ ತಕ್ಕಂತೆ ಪಾಠ ಬೋಧನೆಯಲ್ಲಿ ತೊಡಗುವುದು
  • ಮಕ್ಕಳಿಗೆ ಭಯ ಮುಕ್ತ ವಾತಾವರಣವನ್ನು ನೀಡುವುದು
  • ಸಮುದಾಯದಲ್ಲಿ ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಏಳಿಗೆಗೆ ಸಹಕಾರವನ್ನು ಪಡೆಯುವುದು
  • ಶಾಲೆಗಳ ಸಬಲೀಕರಣಕ್ಕಾಗಿ ಸಮುದಾಯದೊಂದಿಗೆ ಸೇರಿ ದಾನಿಗಳಿಂದ ಆದಷ್ಟು ಸಹಕಾರ ಪಡೆದು ಶಾಲೆಯ ಅಭಿವೃದ್ಧಿಗಾಗಿ ದುಡಿಯುವುದು
  • ಸ್ಥಳೀಯವಾಗಿ ದೊರೆಯುವಂತಹ ಸಂಪನ್ಮೂಲಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದು
  • ಎಸ್ಡಿಎಂಸಿ ಅವರ ಸಹಕಾರದೊಂದಿಗೆ ಶಾಲಾಭಿವೃದ್ಧಿ ಯೋಜನೆ ತಯಾರಿಸಿ ಅದರ ಪೂರ್ಣ ಏಳಿಗೆಗೆ ಸಂಧಿಸುವುದು
  • ಶಾಲೆಯ ಪರಿಸರವನ್ನು ಉತ್ತಮ, ಆಕರ್ಷಕವಾಗಿ ಕಾಣುವಂತೆ ಮಾಡುವುದು
  • ಇಲಾಖೆಯೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದು ಶಾಲೆಯ ಪ್ರಗತಿ ಹಾಗೂ ಅದರ ಅಭಿವೃದ್ಧಿಗೆ ಅವಶ್ಯಕ ವಾಗಿರುವ ಸಹಕಾರವನ್ನು ಹಾಗೂ ಉಪಯೋಗವನ್ನು ಪಡೆಯುವುದು
  • ಕಾಲಕ್ಕೆ ತಕ್ಕಂತೆ ಶಾಲೆಯ ಮಕ್ಕಳಿಗೆ ವಿಶೇಷವಾದ ಚಟುವಟಿಕೆಗಳೊಂದಿಗೆ ಪ್ರೋತ್ಸಾಹಿಸಿ ಕಲಿಕೆಗೆ ಅಣಿಗೊಳಿಸುವುದು
  • ವಿಶೇಷ ಅಗತ್ಯತೆವುಳ್ಳ ಮಕ್ಕಳ ಬಗ್ಗೆ ಕಾಳಜಿ ವಹಿಸುವ ಅವರಿಗೆ ಸಿಗುವ ಎಲ್ಲಾ ಸೌಲಭ್ಯಗಳು ಸಿಗುವಂತೆ ನೋಡಿಕೊಳ್ಳುವುದು
  • ತರಗತಿಯಲ್ಲಿ ನಾವಿನ್ಯತೆ ಹಾಗೂ ಕ್ರಿಯಾಶೀಲತೆಯೊಂದಿಗೆ ಮಕ್ಕಳನ್ನು ಕಲಿಸುವುದು
  • ಪ್ರತಿ ಮಗುವು ವಿವಿಧ ಪರಿಸರಗಳಿಂದ ವಿವಿಧ ಕುಟುಂಬಗಳಿಂದ ಬಂದಿದ್ದು ವಿಭಿನ್ನತೆ ಹೊಂದಿರುತ್ತದೆ ಅಂತಹ ಸಂದರ್ಭದಲ್ಲಿ ಅವರ ಮನವನ್ನು ಅರಿತು ಅವರಿಗೆ ಕಲಿಸಲು ಕ್ಷಮಿಸುವುದು
  • ಉತ್ತಮ ಶಾಲೆಯೆಂದರೆ ಸಕಲ ಮೂಲಭೂತ ಸೌಕರ್ಯಗಳನ್ನು ಹೊಂದಿರುವುದು ಆಗಿದೆ, ಈ ಮೂಲಭೂತ ಸೌಕರ್ಯಗಳನ್ನು ಹೊಂದಲು ಶಿಕ್ಷಕರು ಸಮುದಾಯ ಹಾಗೂ 
  • ಇಲಾಖೆಯ ಸಹಕಾರ ಪಡೆಯಬೇಕಾಗುತ್ತದೆ
  • ಸರ್ಕಾರ ಮಕ್ಕಳ ಗುಣಾತ್ಮಕ ಕಲೆಗೆ ಅನೇಕ ಸೌಲತ್ತುಗಳನ್ನು ನೀಡುತ್ತಿದ್ದು ಅವುಗಳಲ್ಲಿ ಉಚಿತ ಸಮವಸ್ತ್ರ ಉಚಿತ ಶೋ ಉಚಿತ ಪುಸ್ತಕ ಉಚಿತ ಸೈಕಲ್ ವಿತರಣೆ ಇತ್ಯಾದಿ ಸೌಲಭ್ಯಗಳು ನೀಡುತ್ತಿದೆ ಈ ಸೌಲಭ್ಯಗಳು ಎಲ್ಲಾ ಮಕ್ಕಳಿಗೆ ದೊರೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರದ್ದಾಗಿದೆ
  • ಅದೇ ರೀತಿ ಶಿಕ್ಷಕರು ಇಲಾಖೆಯಿಂದ ಆಯೋಜಿಸುವ ತರಬೇತಿಗಳಲ್ಲಿ ಭಾಗವಹಿಸಿ ಉತ್ತಮವಾದ ಅಂಶಗಳನ್ನು ತನ್ನ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು, ತಮ್ಮ ಬೋಧನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದು.
  • ಶಿಕ್ಷಕ ಸಮುದಾಯ ಹಾಗೂ ಇಲಾಖೆಯ ನಡುವೆ ಸೇತುವೆಯಂತೆ ಕಾರ್ಯ ನಿರ್ವಹಿಸಬೇಕಾಗಿದೆ.
  • ಕೆಲವೊಮ್ಮೆ ಶಿಕ್ಷಕರಿಗೆ ತರಗತಿಯ ಕಾರ್ಯಗಳು ಹೊರತುಪಡಿಸಿ ಅನ್ಯ ಕಾರ್ಯಗಳಿಗೆ ನಿಯೋಜಿಸಲಾಗುತ್ತದೆ, ಅವುಗಳೆಲ್ಲವನ್ನು ಮಾಡುವುದರ ಜೊತೆಗೆ ತನ್ನ ತರಗತಿಯ ಮಕ್ಕಳಿಗೆ ಕಲಿಸುವುದರಲ್ಲಿ ಯಾವುದೇ ಕೊರತೆ ಕಾಣದಂತೆ ನೋಡಿಕೊಳ್ಳುವುದು.
  • ಶಿಕ್ಷಕ ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ಯಾವುದೇ ದುಷ್ಟ ಚಟುವಟಿಕೆಗಳಿಗೆ ಬಲಿಯಾಗದೆ ಸಮಾಜಕ್ಕೆ ಮಾದರಿಯಾಗಿ ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳುವುದು.
  • ಪ್ರತಿಯೊಂದು ಮಗುವಿಗೂ ಗಮನಹರಿಸಿ ಮಗುವಿನ ಗುಣಾತ್ಮಕ ಕಲಿಕೆಗೆ ಆದಷ್ಟು ಪ್ರಯತ್ನಿಸುವುದು.
  • ತಂತ್ರಜ್ಞಾನದ ಈ ಕಾಲದಲ್ಲಿ ತಂತ್ರಜ್ಞಾನವನ್ನು ಬಳಸಿ ಮಕ್ಕಳು ಜ್ಞಾನವನ್ನು ಕಟ್ಟಿಕೊಳ್ಳುವಂತೆ ಮಾಡುವುದು ಶಿಕ್ಷಕನ ಜವಾಬ್ದಾರಿ
  • ಇತ್ತೀಚಿಗೆ ಎಲ್ಲಾ ಸರ್ಕಾರಿ ಶಾಲೆಗಳು ಕೂಡ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸ್ಮಾರ್ಟ್ ಕ್ಲಾಸ್ ಗಳನ್ನು ನಿರ್ವಹಿಸುತ್ತಿವೆ, ಇದರ ಸದ್ಬಳಕೆ ಶಿಕ್ಷಕರು ತಮ್ಮ ಬೋಧನೆಯಲ್ಲಿ ಮಾಡಿಕೂಳ್ಳೂವುದು.
  • ಕ್ರಿಯಾತ್ಮಕ ಚಟುವಟಿಕೆಯಾಧಾರಿತ ಬೋಧನೆ.
  • ದೃಕ್ ಶ್ರವಣ ಬೋಧನಾ ಮಾದರಿಗಳ ಬಳಕೆ
  • ನಿಜ ಜೀವನದ ಸನ್ನಿವೇಶಗಳು ಅಥವಾ ನೈಜ ಸಂಗತಿಗಳಿಂದ ಕಲಿಕೆ.

  • ಮೆದುಳಿಗೆ ಮೇವು ಎನ್ನುವ ಭ್ರನ್ ಸ್ಮಾರ್ಮಿಂಗ್ ಚಟುವಟಿಕೆ ಗಳನ್ನು ಆಯೋಜಿಸುವುದು.
  •  ತರಗತಿಯ ಹೊರಗೆ ಕಲಿಕೆ.ಹೊರಾಂಗಣ ಚಟುವಟಿಕೆಗಳು
  •  ಪಾತ್ರಾಭಿನಯದ ಮೂಲಕ ಕಲಿಕಾ ಪ್ರಕ್ರಿಯೆ
  •  ಕಥೆ ಹೇಳುವ ರೂಪದಲ್ಲಿ ಬೋಧನೆ.

  • ತರಗತಿ ಅನೋನ್ಯ ಕ್ರಿಯೆಯ ಪ್ರೇರೇಪಣೆ.

  • ಗುಂಪು ಕಲಿಕೆಯಲ್ಲಿ ತೊಡಗಿಸುವುದು.
  • ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಗಮನ ಹರಿಸುವುದು

ಪಾಲಕರ ಕಾರ್ಯಗಳು:
ಒಂದು ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ, ಎರಡು ಕೈಗಳಿಂದ ಹೇಗೆ ಚಪ್ಪಾಳೆ ತಟ್ಟಲು ಸಾಧ್ಯವೋ ಅದೇ ರೀತಿ ಶಿಕ್ಷಕ ಹಾಗೂ ಪಾಲಕರು ಸೇರಿದರೆ ಮಕ್ಕಳ ಗುಣಾತ್ಮಕ ಕಲಿಕೆಗೆ ಹಾಗೂ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ನಾಂದಿಯಾಗುತ್ತದೆ. ಆದ್ದರಿಂದಲೇ ಪಾಲಕರಿಂದ ಆಯ್ಕೆಯಾದ ಎಸ್ಡಿಎಂಸಿ ಸಮಿತಿಯಲ್ಲಿ ನಾವು ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಹಾಜರಾತಿಗುಣಾತ್ಮಕ ಕಲಿಕೆ ಇವುಗಳಲ್ಲಿ ಸುಸೂತ್ರವಾಗಿ ಸಾಗಲು ಸಹಕಾರಿಯಾಗುವಂತೆ ರಚಿಸಿರುವುದು ಒಂದು ಉದಾಹರಣೆಯಾಗಿದೆ. ಸರ್ಕಾರಿ ಶಾಲೆ ಹಾಗೂ ಮಕ್ಕಳ ಗುಣಾತ್ಮಕ  ಸಬಲೀಕರಣದಲ್ಲಿ ಪೋಷಕರು ಕೈಗೊಳ್ಳಬಹುದಾದ ಕಾರ್ಯಗಳು ಈ ಕೆಳಕಂಡಂತೆ ಮಾಡಬಹುದು.

  • ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಶಾಲೆಗೆ ಕಳುಹಿಸುವುದು ಮತ್ತು ಅವರ ಕಲಿಕೆಯ ಬಗ್ಗೆ ಗಮನ ಹರಿಸುವುದು
  • ಮಕ್ಕಳು ಶಾಲೆಗೆ ಗೈರು ಆಗದಂತೆ ನೋಡಿಕೊಳ್ಳುವುದು
  • ಮಕ್ಕಳ ಪ್ರಗತಿಯ ಬಗ್ಗೆ ಪೋಷಕರ ಸಭೆಯಲ್ಲಿ ಶಿಕ್ಷಕರೊಂದಿಗೆ ಸಮಾಲೋಚಿಸುವುದು
  • ಎಸ್ಡಿಎಂಸಿ ಹಾಗೂ ಪಾಲಕ ಸಭೆಗಳನ್ನು ಕರೆದಾಗ ಭಾಗವಹಿಸಿ ಅದರಲ್ಲಿ ಶಾಲೆ ಅಭಿವೃದ್ಧಿ ಹಾಗೂ ಮಕ್ಕಳ ಕಲಿಕೆ ಅವರ ಹಾಜರಾತಿ ಬಗ್ಗೆ ಕಾಳಜಿ ವಹಿಸುವುದು
  • ಶಾಲೆಯ ಮೂಲಭೂತ ಸೌಕರ್ಯಗಳಾದ ಶೌಚಾಲಯ ಕುಡಿಯುವ ನೀರಿನ ವ್ಯವಸ್ಥೆ ಮುಂತಾದವುಗಳ ಬಗ್ಗೆ ಪಾಲಕರು ಎಸ್ಡಿಎಂಸಿ ಸಭೆಗಳಲ್ಲಿ ಚರ್ಚಿಸಿ ಅಗತ್ಯವಿದ್ದರೆ ಸಮುದಾಯದಲ್ಲಿ ಸಹಕಾರ ಪಡೆದು ಇಲಾಖೆಯಿಂದ ಅಥವಾ ತಮ್ಮ ಸುತ್ತಲಿನ ಇತರೆ ದೇಣಿಗೆ ದಾರ ರಿಂದ ಮಾಡಿಸಲು ಪ್ರಯತ್ನಿಸುವುದು
  • ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಖಾಸಗಿ ಶಾಲೆಗಳಿಗಿಂತ ಉತ್ತಮವಾದ ಸೌಲಭ್ಯ ಪೂರ್ಣವಾದ ಶಾಲೆಗಳನ್ನು ನಿರ್ಮಿಸಿರುವುದು ಕಂಡಿದ್ದೇವೆ. ಅದೇ ರೀತಿ ಪಾಲಕರು ಮನಸ್ಸು ಮಾಡಿದರೆ ಸರಕಾರಿ ಶಾಲೆಗಳು ಯಾವ ಖಾಸಗಿ ಶಾಲೆಗಳಿಗಿಂತ ಕಡಿಮೆ ಇರುವುದಿಲ್ಲ.
  • ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಶಿಕ್ಷಕರು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಪಾಲಕರ ಸಹಕಾರವು ಬಹಳ ಅಗತ್ಯವಾಗಿರುತ್ತದೆ
  • ಇಲಾಖೆ ಹಾಗೂ ಶಾಲೆಯಿಂದ ನಡೆಯುವ ಯಾವುದೇ ರೀತಿಯ ಮಕ್ಕಳ ಕಾರ್ಯಕ್ರಮಗಳಿಗೆ ಪಾಲಕರು ಸಹಕಾರವನ್ನು ನೀಡಿ ಕೈಜೋಡಿಸುವುದು
  • ಪಾಲಕರು ಮಕ್ಕಳ ಹಾಗೂ ಶಿಕ್ಷಕರ ನಡುವೆ ಸೇತುವೆಯ ಕಾರ್ಯವನ್ನು ಮಾಡುವುದು
  • ಇಲಾಖೆಯು ಮಕ್ಕಳ ಗುಣಾತ್ಮಕ ಕಲಿಕೆಗಾಗಿ ಬಹಳಷ್ಟು ಸೌಲಭ್ಯಗಳನ್ನು ನೀಡುತ್ತಿದ್ದು ಅವುಗಳು ಮಕ್ಕಳಿಗೆ ತಲುಪಲು ಪೋಷಕರು ಸಹ ನೆರವಾಗಬೇಕು
  • ಅಲ್ಲಿ ಸರಕಾರಿ ಶಾಲೆಗಳಲ್ಲಿ ಪಾಠ ಹೇಳಲು ಬರುವ ಶಿಕ್ಷಕರಿಗೆ ಕೆಲವು ಸೌಲಭ್ಯ ಸವಲತ್ತುಗಳ ನೀಡಿಕೆಯನ್ನು ಊರವರು ಮಾಡಬಹುದು.
  •  ಶ್ರೀಮಂತ ಕಾರ್ಪೊರೇಟ್ ಸಂಸ್ಥೆಗೆ ಆ ಊರಿನ ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುವಂತೆ ಪ್ರೇರೇಪಿಸಬಹುದು.
  • ಪಾಲಕರು ಮಗು ಶಾಲೆಯಿಂದ ಕಲಿತು ಹೋದಮೇಲೆ ಮಗು ಏನನ್ನು ಕಲಿತಿದೆ? ಎಷ್ಟು ಕಲಿತಿದೆ? ಎಂದು ಗಮನಿಸಿ ,ಅದರ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸುವುದು.
  • ಶಾಲೆಯಲ್ಲಿ ಮಗು ಕಲಿತು ಹೋದಮೇಲೆ ಪಾಲಕರು ಸ್ವಲ್ಪ ಸಮಯ ಮಗುವಿಗಾಗಿ ಮೀಸಲಿಟ್ಟು ಗೃಹಪಾಠ ಮಾಡಿಸುವುದು.
  • ಶಿಕ್ಷಕರ ನಂತರ ಶಾಲೆಯ ರಕ್ಷಣೆ ಪಾಲಕರ ಹೊಣೆ ಆಗಿರುತ್ತದೆ.
  • ಶಾಲೆಯ ಅಂದಚೆಂದ ಹೆಚ್ಚಿಸಲು ಶಾಲಾ ಕೈತೋಟ ಮಾಡುವುದು ಹಾಗೂ ಅದರ ಪಾಲನೆ ಪೋಷಣೆಯ ಜವಾಬ್ದಾರಿಯನ್ನು ಹೊರುವುದು.
  • ಶಾಲೆಯಲ್ಲಿ ಆಚರಿಸುವ ಸಭೆ-ಸಮಾರಂಭಗಳು ಹಾಗೂ ರಾಷ್ಟ್ರೀಯ ಹಬ್ಬಗಳಲ್ಲಿ ಪಾಲ್ಗೊಳ್ಳುವುದು.


ಇಲಾಖೆ ಮಾಡಬಹುದಾದಂತಹ ಕಾರ್ಯಗಳು:
               ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯ ಸರ್ಕಾರದ ಬಹಳ ಹಳೆಯದಾದ, ದೊಡ್ಡದಾದ, ಪ್ರಮುಖವಾದ ಇಲಾಖೆಯಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸಾವಿರಾರು ಶಾಲೆಗಳು, ಲಕ್ಷಾಂತರ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದು, ಇಲಾಖೆಯಡಿಯಲ್ಲಿ ಒಂದು ಕೋಟಿಗೂ ಮೀರಿ ವಿಧ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ.ಸಂವಿಧಾನದ 45ನೇ ಅನುಚ್ಛೇದದ ಪ್ರಕಾರ ಈ ದೇಶದಲ್ಲಿ ಹುಟ್ಟಿದ ಪ್ರತಿಯೊಂದು ಮಗುವಿಗೂ ಉಚಿತ ಮತ್ತು ಕಡ್ಡಾಯ, ಗುಣಾತ್ಮಕ ಶಿಕ್ಷಣವನ್ನು ನೀಡುವುದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪಟ್ಟಬದ್ಧ ಜವಾಬ್ದಾರಿಯಾಗಿದೆ.

                     ಈ ನಿಟ್ಟಿನಲ್ಲಿ ಇಲಾಖೆಯು ಹಲವಾರು ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ರಾಜ್ಯ ಸರ್ಕಾರದ ಹಾಗೂ ಕೇಂದ್ರ ಸಹಯೋಗದೊಂದಿಗೆ ಸರ್ವಶಿಕ್ಷಣ ಅಭಿಯಾನ ಯೋಜನೆಯನ್ನುಹಮ್ಮಿಕೊಂಡಿದ್ದು ನಿಗದಿತ ಅವಧಿಯಲ್ಲಿ ಗುರಿಯನ್ನು ಸಾಧಿಸಲು ಕಾರ್ಯಕ್ರಮವನ್ನು ನಿರೂಪಿಸಲಾಗಿದೆ. ಪ್ರತಿ ಮಗುವಿಗೂ ಪ್ರಾಥಮಿಕ ಶಿಕ್ಷಣವನ್ನು ನೀಡಲು ಶೇಕಡ 100 ರಷ್ಟು ಅವಕಾಶ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಕರ್ನಾಟಕ ರಾಜ್ಯವು ಇತ್ತೀಚಿನ ದಶಕಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಶಾಲೆಗಳನ್ನು ಸ್ಥಾಪಿಸುವ ಮೂಲಕ ದೇಶದಲ್ಲಿಯೇ ಮೂಂಚೂಣಿಯಲ್ಲಿರುವ ರಾಜ್ಯ ಎಂದು ಪರಿಗಣಿಸಲಾಗಿದೆ.

               ಸರ್ಕಾರಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಹಾಗೂ ಪ್ರೌಢಶಾಲೆಗಳಲ್ಲಿ ಹಾಗೂ ಅನುದಾನಿತ, ಅನುದಾನರಹಿತ ವಿಧ್ಯಾಬ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮಾಹಿತಿ ಸಂಗ್ರಹ ಹಾಗೂ ಕ್ರೋಢಿಕರಣ ಮಾಡುವುದು ಹಾಗೂ ವಿದ್ಯಾರ್ಥಿಗಳ ತರಗತಿಗಳಿಗೆ ಅನುಗುಣವಾಗಿ ದಾಖಲಾತಿ, ಹಾಜರಾತಿ, ವಯಸ್ಸು, ಲಿಂಗ ಹಾಗೂ ವಿವಿಧ ಸಾಮಾಜಿಕ ಗುಂಪುಗಳನ್ನು ಆಧರಿಸಿ, ಅಂಕಿಅಂಶಗಳನ್ನು ಸಂಗ್ರಹಿಸುವುದು ಒಂದು ಸವಾಲಿನ ಕಾರ್ಯವಾಗಿದೆ.

             ಈ ಹಿನ್ನೆಲೆಯಲ್ಲಿ ಇಲಾಖೆಯು ಆಧುನಿಕ ತಂತ್ರಜ್ಞಾನದ ಬಳಕೆಯ ಮೂಲಕ, ಇ-ಆಡಳಿತ ಘಟಕವನ್ನು ಇಲಾಖೆಯಲ್ಲಿ ಅನುಷ್ಠಾನಗೊಳಿಸುವುದರ ಮೂಲಕ ಆಡಳಿತದಲ್ಲಿ ವಸ್ತುನಿಷ್ಟವಾದ, ಪಾರದರ್ಶಕವಾದ ಮಾಹಿತಿಯನ್ನು ಅತೀ ವೇಗವಾಗಿ ಸಾರ್ವಜನಿಕರಿಗೆ ಹಾಗೂ ಇಲಾಖೆಗೆ ನೀಡುವುದರಲ್ಲಿ ಯಶಸ್ವಿಯಾಗಿದೆ.

ಇಲಾಖೆಯಲ್ಲಿ ಇ-ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು, ಶೈಕ್ಷಣಿಕ ಉಪಗ್ರಹದ ಸಹಾಯದಿಂದ ಉಪಗ್ರಹ ಆಧಾರಿತ ತರಬೇತಿಗಳನ್ನು ಶಿಕ್ಷಕರಿಗೆ ಹಾಗೂ ಕ್ಷೇತ್ರ ಹಂತದ ಅಧಿಕಾರಿಗಳಿಗೆ ನೀಡುವಲ್ಲಿ ಮತ್ತು ಪ್ರಗತಿಯನ್ನು ಅವಲೋಕನ ಮಾಡಲು ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ಕಾರ್ಯಕ್ರಮಗಳಿಗಾಗಿ ಇಲಾಖೆಯು ಡಿ. ಎಸ್. ಇ ಆರ್.ಟಿ. ಬೆಂಗಳೂರಿನಲ್ಲಿ ತನ್ನದೇ ಆದ ಸ್ಟುಡಿಯೋವನ್ನು ಸ್ಥಾಪಿಸಿ, ಅಪ್ ಲಿಂಕ್ ವ್ಯವಸ್ಥೆಯನ್ನೂ ಸಹ ಮಾಡಿದೆ.ಕ್ಷಣಿಕ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಪ್ರಸಾರಮಾಡಲು ಜಿಲ್ಲೆ ಮತ್ತು ಬ್ಲಾಕ್ ಹಂತಗಳಲ್ಲಿ ಸ್ವೀಕೃತಿ ಕೇಂದ್ರಗಳನ್ನೂ ಸಹ ಸ್ಥಾಪಿಸಲಾಗಿದೆ.
ಇಲಾಖೆ ಶಾಲೆಗಳ  ಮತ್ತು ಮಕ್ಕಳ ಗುಣಾತ್ಮಕ ಶಿಕ್ಷಣದ ಸಬಲೀಕರಣಕ್ಕಾಗಿ ಈ ಕೆಳಕಂಡಂತೆ ಇನ್ನಷ್ಟು ಕಾರ್ಯಗಳನ್ನು ಮಾಡಬಹುದಾಗಿದೆ.
     

  • ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಉತ್ತಮಪಡಿಸುವುದು ಶೌಚಾಲಯ ನೀರಿನ ವ್ಯವಸ್ಥೆ ಕೊಠಡಿಗಳ ವ್ಯವಸ್ಥೆ ಕಾಂಪೌಂಡ್ ವ್ಯವಸ್ಥೆ ಉತ್ತಮ ರೀತಿಯಲ್ಲಿ ಇರುವಂತೆ ನೋಡಿಕೊಳ್ಳುವುದು
  • ಮಕ್ಕಳ ಸಂಖ್ಯೆಯ ಅನುಪಾತಕ್ಕೆ ತಕ್ಕಂತೆ ಶಾಲೆಗಳಿಗೆ ಶಿಕ್ಷಕರನ್ನು ಯೋಜಿಸುವುದು .
  • ಸರ್ಕಾರದ ವತಿಯಿಂದ ಮಕ್ಕಳಿಗೆ ನೀಡಲಾಗುತ್ತಿರುವ ಉಚಿತ ಸಮವಸ್ತ್ರ ಶೂ ಪುಸ್ತಕಗಳು ಸಕಾಲಕ್ಕೆ ತಲುಪುವಂತೆ ನೋಡಿಕೊಳ್ಳುವುದು
  • ಶಾಲೆಯಲ್ಲಿ ಪಾಠೋಪಕರಣಗಳು ಮತ್ತು ಪೀಠೋಪಕರಣಗಳ ಅವಶ್ಯಕತೆ ಇದ್ದು, ಉತ್ತಮ ರೀತಿಯ ಪಾಠೋಪಕರಣಗಳ ವ್ಯವಸ್ಥೆಯನ್ನು ಮಕ್ಕಳಿಗೆ ಮಾಡಿಕೊಡುವುದು.
  • ಸರಕಾರಿ ಶಾಲೆಗಳಲ್ಲಿ ಹೆಚ್ಚಿನ ಪಾಠೋಪಕರಣ ಸೌಲಭ್ಯಗಳಿದ್ದರೆ ಮಕ್ಕಳಾಗಲೀ ಹೆತ್ತವರಾಗಲೀ ಹೆಚ್ಚು ಶುಲ್ಕ ತೆತ್ತು ಖಾಸಗಿ ಶಾಲೆಗಳತ್ತ ಹೋಗುವುದಿಲ್ಲ.
  • ತರಗತಿಯಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಸುಗಮಕಾರನಾಗಿ ಕೆಲಸ ಮಾಡುವ ಶಿಕ್ಷಕರನ್ನು ಆಗಾಗ ಉತ್ತಮ ತರಬೇತಿಗಳನ್ನು ಆಯೋಜಿಸುವುದು.
  • ಶಿಕ್ಷಕರನ್ನು ಅನ್ಯ ಕಾರ್ಯಗಳಿಗೆ ಯೋಜಿಸಿದೆ ತರಗತಿಯಲ್ಲಿ ನೆಮ್ಮದಿಯಿಂದ ಪಾಠಮಾಡಲು ಬಿಟ್ಟರೆ ಅರ್ಧ ಸಮಸ್ಯೆ ಪರಿಹಾರದಂತೆ ಆಗುತ್ತದೆ.
  • ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಐ) ಜಾರಿಯಿಂದ ಬಡ, ಮಧ್ಯಮ ವರ್ಗದ ಮಕ್ಕಳು ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗಿದೆ ಎಂಬುದು ಒಪ್ಪುವ ವಿಚಾರವೇ. ಆದರೆ ಇದರಿಂದ ಸರಕಾರಿ ಶಾಲೆಗಳ ಮೇಲೆ ಆಗಿರುವ ದುಷ್ಪರಿಣಾಮವನ್ನೂ ಯೋಚಿಸಬೇಕು.
  •  ಆರ್‌ಟಿಇ ಮೂಲಕ ಖಾಸಗಿ ಶಾಲೆಯಲ್ಲಿ ಸೀಟು ಪಡೆಯುವ ಸಾಧ್ಯತೆ ಇರುವ ಹೆತ್ತವರು, ಅದನ್ನೇ ಮಾಡುತ್ತಾರೆ ಹೊರತುಪಡಿಸಿ, ಸನಿಹದಲ್ಲೇ ಇರುವ ಸರಕಾರಿ ಶಾಲೆಗೆ ಮಕ್ಕಳನ್ನು ಕಳಿಸುವ ಉತ್ಸಾಹ ತೋರುವುದಿಲ್ಲ. ಸರಕಾರಿ ಶಾಲೆ ಸೇರಬೇಕಾದ ಮಕ್ಕಳೂ ಖಾಸಗಿ ಶಾಲೆ ಪಾಲಾಗುತ್ತಾರೆ. ಸರಕಾರಿ ಶಾಲೆಗಳ ಅಭಿವೃದ್ದಿಗೆ ಕ್ರಮ ವಹಿಸುವುದನ್ನು ಬಿಟ್ಟು ಖಾಸಗಿ ಶಾಲೆಗಳ ಬೆಳವಣಿಗೆಗೆ ಈ ಕಾಯ್ದೆ ಪರೋಕ್ಷವಾಗಿ ಬೆಂಬಲ ನೀಡಿದಂತಾಗುತ್ತದೆ.
  • ಈ ತಂತ್ರಜ್ಞಾನದ ಕಾಲದಲ್ಲಿ ಸರ್ಕಾರಿ ಶಾಲೆಯಲ್ಲಿ ತಂತ್ರಜ್ಞಾನಭರಿತ ಶಿಕ್ಷಣ ನೀಡಲು ಕಂಪ್ಯೂಟರ್ ಸ್ಮಾರ್ಟ್ ಕ್ಲಾಸ್ ನಂತಹ ವ್ಯವಸ್ಥೆಯೇ ಮಾಡುವುದು.
  • ಇತ್ತೀಚಿನ ದಿನಗಳಲ್ಲಿ ನಮ್ಮ ಶಿಕ್ಷಣ ಕ್ಷೇತ್ರದಲ್ಲೂ ತಂತ್ರಜ್ಞಾನದ ಬಳಕೆ ಯಾಗುತ್ತಿದ್ದು ಅದರಿಂದ ನಿಖರವಾದ ಪಾರದರ್ಶಕತೆಯಿಂದ ಕೂಡಿದ ಮಾಹಿತಿ ಕಲೆಹಾಕಲಾಗುತ್ತಿದೆ ಆದರೆ ಅದರ ಬಗ್ಗೆ ಶಿಕ್ಷಕರಿಗೆ ತರಬೇತಿಗಳನ್ನು ನೀಡುವುದು ಉತ್ತಮ.

ಈ ಮೇಲ್ಕಂಡಂತೆ ಶಿಕ್ಷಕರು ಪಾಲಕರು ಹಾಗೂ ಇಲಾಖೆ ಸಹಯೋಗದಿಂದ ಕಾರ್ಯವನ್ನು ಮಾಡಿದರೆ ಸರ್ಕಾರಿ ಶಾಲೆಗಳು ಹಾಗೂ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಬಹಳಷ್ಟು ಸಹಕಾರಿ ಯಾವುದು. ಸರ್ಕಾರಿ ಶಾಲೆಗಳು ಇತ್ತೀಚಿನ ದಿನಗಳಲ್ಲಿ ಬಹಳ ವೇಗವಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಉತ್ತಮ ರೀತಿಯ ಶಿಕ್ಷಣವನ್ನು ನೀಡುವಲ್ಲಿ ಯಶಸ್ವಿ ಯಾಗಿದ್ದಾರೆ. ಇದಕ್ಕೆ ಶಿಕ್ಷಣ ಇಲಾಖೆಯ ಅವಿರತ ಪರಿಶ್ರಮ ಹಾಗೂ ವಿನೂತನ ಯೋಜನೆಗಳು, ಸಂಶೋಧನೆಗಳು ,ಸಂಶೋಧನೆಗಳು, ಪ್ರಯೋಗಗಳು ಸಾಕ್ಷಿಯಾಗಿವೆ. ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಇಲಾಖೆ ಉತ್ತಮ ಪಡಿಸುತ್ತಿದೆ, ಹಲವಾರು ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮ ರೀತಿಯ ಸೌಲಭ್ಯಗಳನ್ನು ಹೊಂದಿರುವುದು ನೋಡಬಹುದು. ಪರೀಕ್ಷೆಗಳಲ್ಲೂ ಸರ್ಕಾರಿ ಶಾಲೆಗಳು ನೂರಕ್ಕೆ ನೂರು ಪ್ರತಿಶತ ಫಲಿತಾಂಶವನ್ನು ತಂದು ಕೊಡುತ್ತಿರುವುದು ನಾವು ಕಾಣುತ್ತಿದ್ದೇವೆ ಇದಕ್ಕೆ ಕಾರಣ ಶಿಕ್ಷಕ ವರ್ಗದ ಪರಿಶ್ರಮ ಹಾಗೂ ಇಲಾಖೆಯ ಅವಿರತ ಕಾಳಜಿ ಹಾಗೂ ಸಹಕಾರವಾಗಿದೆ.